ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳ ಮತು ಮಹಿಳೆಯರ ರಕ್ಷಣೆ
ಜಂಟಿ ಕಾರ್ಯಾಚರಣೆ ದಿನಾಂಕ 15-12-2022
ಪಂಪವೆಲ್,ನಂತೂರ್ ವಲಯದಲ್ಲಿ ಬಾಲ ಭಿಕ್ಷಾಟಣೆಯಲ್ಲಿ ತೊಡಗಿದ ಮಕ್ಕಳ ಹಾಗು ಪೋಷಕರ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ರಕ್ಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪಂಪವೆಲ್, ನಂತೂರು, ಪದವು ಬಳಿ ಮಗುವನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಎಂದು ಚೈಲ್ಡ್‍ಲೈನ್-1098 ಗೆ ಸಾರ್ವಜನಿಕರೊರ್ವರು 1098 ದೂರವಾಣಿ ಕರೆಮಾಡಿ ಮಾಹಿತಿ ನೀಡಿದರು. ಪ್ರಕರಣದ ಅನುಸರಣೆಗಾಗಿ ಚೈಲ್ಡ್‍ಲೈನ್ ತಂಡ ಸದಸ್ಯರಾದ ಆಶಾಲತ ಹಾಗೂ ಪ್ರಜ್ವಲ್‍ರವರು ಕದ್ರಿ ಪೊಲೀಸ್‍ಠಾಣೆಗೆ ಬೇಟಿ ನೀಡಿದಾಗ ಸಿಬ್ಬಂದಿಗಳು ಕಾರ್ಯನಿಮಿತ್ತ ಹೊರಗಡೆ ಹೋಗಿರುವುದಾಗಿ, ನೀವು ಸ್ಥಳ ಬೇಟಿ ನೀಡಿ ಮಕ್ಕಳು ಕಂಡು ಬಂದರೆ, ಕರೆ ಮಾಡಲು ತಿಳಿಸಿದರು. ಚೈಲ್ಡ್‍ಲೈನ್ ತಂಡದ ಸದಸ್ಯರು ಕೆ.ಪಿ.ಟಿ ಯಿಂದ ನಂತೂರು ಪದವಿನ ಬಳಿ ಬಂದಾಗ ಸುಮಾರು 10 ರಿಂದ 12 ಮಹಿಳೆಯರು ಹಾಗೂ ಪುರುಷರು ಮಕ್ಕಳೊಂದಿಗೆ ಬಿಕ್ಷಾಟಣೆಯಲ್ಲಿ ನಿರತರಾರಿಗಿರುವುದು ಕಂಡುಬಂದಿದ್ದು, ಮಕ್ಕಳನ್ನು ಹಿಡಿದು ವ್ಯಾಪಾರ ಹಾಗೂ ಭಿಕ್ಷೆಬೇಡುವುದು ಕಾನೂನಿನ ಉಲ್ಲಂಘಣೆಯಾಗುತ್ತದೆ.ಎಂದು ಸುಮಾರು ಸಾರಿ ಮಾಹಿತಿ ನೀಡಿದರು ಸಹ ಕೆ.ಪಿ.ಟಿ ಯಿಂದ ನಂತೂರು ಪದವಿಗೆ ಬರುವ ಹೆದ್ದಾರಿಯಲ್ಲಿ ಬೇರೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಬಂದಂತಹ ವಲಸಿಗರು ಡೇರೆಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದು, ಅವರೊಂದಿಗೆ ಮಹಿಳೆಯರು,ಮಕ್ಕಳು ಅಪಾಯಕರ ಸ್ಥಿತಿಯಲ್ಲಿ ಇರುವುದು ಕಂಡು ಬಂದಿರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿ ಸಮಾಜ ಕಲ್ಯಾಣ ಇಲಾಖೆ, ಬಾಲ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಾಣ ಘಟಕ,112 ಪೊಲೀಸ್ ಇಲಾಖೆ ಸೆರಿದಂತೆ ಕಾರ್ಯಾಚರಣೆಯನ್ನು ನಡೆಸಲು ದಿನಾಂಕ 15-12-2022 ರಂದು ಕೋರಿದಾಗ, ಕೂಡಲೆ ಎಲ್ಲಾ ಇಲಾಖೆಯ ಅಧೀಕಾರಿಗಳು ಸ್ಥಳಕ್ಕೆ ಭೆಟಿನೀಡಿ, ಇಬ್ಬರು ಬಾಲ ಭಿಕ್ಷಾಟನೆಯ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ 3 ಮಹಿಳೆಯರು 4 ಪುರುಷರು ಹಾಗು ಇನ್ನಿತರ ಪೊಷಕರಿಗೆ ಅರಿವು ನೀಡಿ ಕರ್ನಾಟಕದ ಭಿಕ್ಷಾಟಣೆ ನಿಷೇಧ ಕಾಯ್ದೆ, 1975 (11) ರ ಅನ್ವಯ ಕಾನೂನಾತ್ಮಕವಾಗಿ ಕ್ರಮ ವಹಿಸುವ ನಿಯಮಗಳನ್ನು ಮನವರಿಕೆ ಮಾಡಲಾಹಿತು. ಹಾಗು ಭಿಕ್ಷಾಟಣೆಯಲ್ಲಿ ನಿರತರಾದವರನ್ನು ರಕ್ಷಿಸಲಾಯಿತು. ಕಾರ್ಯಾಚರಣೆಯಲ್ಲಿ ಶ್ರೀಮತಿ ಶೈಲಾ ಕೆ.ಕಾರಿಗೆ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು,ಜಿಲ್ಲಾ ಮಕ್ಕಳ ಘಟಕ ದ.ಕ ಜಿಲ್ಲೆ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಧಿಕಾರಿಗಳು,ಚೈಲ್ಡ್‍ಲೈನ್ 1098 ಶ್ರೀಮತಿ ರೋಹಿಣಿ ಗೋಗುಲ್ ನಗರ ಸಂಯೋಜಕರು ಸ್ಕೂಲ್ ಆಪ್ ಸೋಶಿಯಲ್ ವರ್ಕ, ರೋಶನಿ ನಿಲಯ ದ.ಕ.ಜಿಲ್ಲೆ. ಮತ್ತು ಪಡಿ ಕೆಂದ್ರ ಚೈಲ್ಡ್‍ಲೈನ್ 1098 ತಂಡದ ಸದಸ್ಯರು ದ.ಕ ಜಿಲ್ಲೆ. ಶ್ರೀ ಶ್ರೀನಿವಾಸ, ಬಾಲ ಕಾರ್ಮಿಕ ಅಧಿಕಾರಿಗಳು. ಉತ್ತರ ಹಾಗು ದಕ್ಷಿಣ ವಲಯದ ಶಿಕ್ಷಣ ಇಲಾಖೆಯ ಶ್ರೀಮತಿ ತಸಮ್ಯ, ಮತ್ತ ಸದಸ್ಯರು. ಹಾಗು 112 ಪೊಲೀಸ ಅಧಿಕಾರಿ ಹಾಗು ಒSW ವಿದ್ಯಾರ್ಥಿಗಳು ಭಾಗವಹಿಸಿದ್ದರು.